ಸಿನಿಮಾ

ಭಾರತದ ಮೊದಲ ಎಐ (AI) ಆಧಾರಿತ ನೈಜ ಕ್ರೈಮ್ ಸರಣಿ ‘ಕೊಲ್ಯಾಟರಲ್ ಸೋಲ್ಸ್’. ತಂತ್ರಜ್ಞಾನ ಮತ್ತು ನೈಜತೆಯ ಸಮ್ಮಿಲನ.

Hemanth Rajashekar

ವರದಿಗಾರರು (Reporter)

Hemanth Rajashekar

12:30 AM IST

ಭಾರತದ ಮೊದಲ ಎಐ (AI) ಆಧಾರಿತ ನೈಜ ಕ್ರೈಮ್ ಸರಣಿ ‘ಕೊಲ್ಯಾಟರಲ್ ಸೋಲ್ಸ್’. ತಂತ್ರಜ್ಞಾನ ಮತ್ತು ನೈಜತೆಯ ಸಮ್ಮಿಲನ.

ಮನರಂಜನಾ ಜಗತ್ತಿನಲ್ಲಿ ತಂತ್ರಜ್ಞಾನದ ಬಳಕೆ ಹೊಸ ಹೊಸ ಆವಿಷ್ಕಾರಗಳಿಗೆ ನಾಂದಿಹಾಡುತ್ತಿದೆ. ಇದೀಗ ದಕ್ಷಿಣ ಭಾರತದ ಖ್ಯಾತ ಮಾಧ್ಯಮ ದಿಗ್ಗಜ ಮತ್ತು ನಿರ್ದೇಶಕ ತ್ಯಾಗರಾಜ್ ರವಿಚಂದ್ರ ನೇತೃತ್ವದ ‘ವೂಫ್ ಫಿಲ್ಮ್ಸ್’ ಪ್ರೊಡಕ್ಷನ್ ಹೌಸ್, ಭಾರತದ ಅತ್ಯಂತ ಮೊದಲ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಆಧಾರಿತ ನೈಜ ಕ್ರೈಮ್ ಸರಣಿಯೊಂದನ್ನು ನಿರ್ಮಿಸಲು ಸಜ್ಜಾಗಿದೆ. ಈ ಮಹತ್ವಾಕಾಂಕ್ಷಿ ಸರಣಿಗೆ ‘ಕೊಲ್ಯಾಟರಲ್ ಸೋಲ್ಸ್: ಬ್ರೋಕನ್ ಸೈಲೆನ್ಸ್’ (Collateral Souls: Broken Silence) ಎಂದು ಹೆಸರಿಡಲಾಗಿದ್ದು, ಇದು ಭಾರತೀಯ ಹಾಗೂ ಕನ್ನಡ ಚಿತ್ರರಂಗದಲ್ಲೇ ಅತ್ಯಂತ ಗಮನಾರ್ಹ ಹಾಗೂ ನವೀನ ಪ್ರಯತ್ನ.

ಇದೀಗ ಈ ಬಹುನಿರೀಕ್ಷಿತ ಸರಣಿಯ ಅಧಿಕೃತ ಟ್ರೇಲರ್ ಪ್ಯಾನ್-ಇಂಡಿಯಾ (Pan-India) ಮಟ್ಟದಲ್ಲಿ ಬಿಡುಗಡೆಯಾಗಿದ್ದು, ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸುತ್ತಿದೆ.

ವೂಫ್ ಫಿಲ್ಮ್ಸ್ (Woof Films) ನ ಹೊಸ ಸೃಷ್ಟಿ:

‘ಕೊಲ್ಯಾಟರಲ್ ಸೋಲ್ಸ್’ ಸರಣಿಯನ್ನು ನಿರ್ಮಿಸುತ್ತಿರುವ ವೂಫ್ ಫಿಲ್ಮ್ಸ್ ಇಂದಿನ ಡಿಜಿಟಲ್ ಯುಗದ ಅತ್ಯಂತ ಪ್ರಭಾವಶಾಲಿ ಪ್ರೊಡಕ್ಷನ್ ಹೌಸ್ ಆಗಿದೆ. ತ್ಯಾಗರಾಜ್ ರವಿಚಂದ್ರ ಅವರ ನೇತೃತ್ವದಲ್ಲಿ ಮುನ್ನಡೆಯುತ್ತಿರುವ ಈ ಸಂಸ್ಥೆಯು ಕೇವಲ ಸಾಂಪ್ರದಾಯಿಕ ಕಾರ್ಯಕ್ರಮಗಳಿಗಷ್ಟೇ ಸೀಮಿತವಾಗಿಲ್ಲ. ಬದಲಿಗೆ ನವೀನ ಗೇಮ್ ಶೋ ಫಾರ್ಮ್ಯಾಟ್‌ಗಳು, ಹೈ-ಇಂಪ್ಯಾಕ್ಟ್ ಕಮರ್ಷಿಯಲ್ ಜಾಹೀರಾತುಗಳು, ಬೃಹತ್ ಕಾರ್ಪೊರೇಟ್ ಆಡಿಯೋ-ವಿಶುವಲ್ ಪ್ರೊಡಕ್ಷನ್‌ಗಳು ಮತ್ತು ಅಂತರರಾಷ್ಟ್ರೀಯ ಮಟ್ಟದ ಈವೆಂಟ್‌ಗಳನ್ನು ವಿನ್ಯಾಸಗೊಳಿಸುವಲ್ಲಿ ಪರಿಣತಿ ಪಡೆದಿದೆ.

ಉದ್ಯಮದ ಅತ್ಯುತ್ತಮ ತಾಂತ್ರಿಕ ಪ್ರವೀಣರನ್ನು ಒಳಗೊಂಡಿರುವ ವೂಫ್ ಫಿಲ್ಮ್ಸ್ ತಂಡವು ಸದಾ ಹೊಸ ಆಲೋಚನೆಗಳಿಗೆ ಆದ್ಯತೆ ನೀಡುತ್ತದೆ. ಈಗ ‘ಕೊಲ್ಯಾಟರಲ್ ಸೋಲ್ಸ್: ಬ್ರೋಕನ್ ಸೈಲೆನ್ಸ್’ ಮೂಲಕ ಭಾರತೀಯ ಒಟಿಟಿ ಹಾಗೂ ಡಿಜಿಟಲ್ ಕಂಟೆಂಟ್ ಮಾರುಕಟ್ಟೆಯಲ್ಲಿ ಹೊಸ ಇತಿಹಾಸ ಬರೆಯಲು ಸಜ್ಜಾಗಿದೆ.

ತ್ಯಾಗರಾಜ್ ರವಿಚಂದ್ರ ಸಾರಥ್ಯ:

ಮನರಂಜನಾ ಉದ್ಯಮದಲ್ಲಿ 19 ವರ್ಷಗಳಿಗೂ ಹೆಚ್ಚಿನ ಸುದೀರ್ಘ ಅನುಭವ ಹೊಂದಿರುವ ತ್ಯಾಗರಾಜ್ ರವಿಚಂದ್ರ, ದಕ್ಷಿಣ ಭಾರತದ ಅತ್ಯಂತ ಯಶಸ್ವಿ ಮಾಧ್ಯಮ ತಜ್ಞರಲ್ಲಿ ಒಬ್ಬರು. ಐಕಾನಿಕ್ ಟಿವಿ ಶೋಗಳ ನಿರ್ದೇಶನ – ಕನ್ನಡದ ಕೋಟ್ಯಾಧಿಪತಿ ಮತ್ತು ಬಿಗ್ ಬಾಸ್ ಕಾರ್ಯಕ್ರಮದ ಮೂರು ಸೀಸನ್‌ಗಳನ್ನು ಇವರು ಯಶಸ್ವಿಯಾಗಿ ನಿರ್ದೇಶಿಸಿದ್ದಾರೆ.

ಪಿಆರ್‌ಕೆ ಆ್ಯಪ್ (PRK App) ಪರಿಕಲ್ಪನೆಯ ರೂವಾರಿ ಹಾಗೂ ಪ್ರಸ್ತುತ ಕಂಟೆಂಟ್ ಹೆಡ್!

Click download App:

ಕನ್ನಡದ ಹೆಮ್ಮೆಯ ಸಂಸ್ಥೆಯಾದ ಪಿಆರ್‌ಕೆ (PRK) ನೆಟ್‌ವರ್ಕ್‌ನ ಡಿಜಿಟಲ್ ಹೆಜ್ಜೆಯಾದ ‘PRK App’ ಪರಿಕಲ್ಪನೆಯಲ್ಲಿ ತ್ಯಾಗರಾಜ್ ರವಿಚಂದ್ರ ಅವರು ಪ್ರಮುಖ ರೂವಾರಿಗಳಲ್ಲಿ ಒಬ್ಬರಾಗಿದ್ದಾರೆ. ಪ್ರಸ್ತುತ ಪಿಆರ್‌ಕೆ ಆ್ಯಪ್‌ನ ಕಂಟೆಂಟ್ ಹೆಡ್ (Content Head) ಆಗಿ ಕಾರ್ಯನಿರ್ವಹಿಸುತ್ತಿದ್ದು. ಕಂಟೆಂಟ್ ಕ್ರಿಯೇಷನ್ ಮತ್ತು ಡಿಜಿಟಲ್ ಆವಿಷ್ಕಾರಗಳಲ್ಲಿ ಅವರಿಗಿರುವ ಅಪಾರ ಜ್ಞಾನಕ್ಕೆ ಈ ಜವಾಬ್ದಾರಿಯೇ ಸಾಕ್ಷಿಯಾಗಿದೆ.

ತಂತ್ರಜ್ಞಾನ ಮತ್ತು ನೈಜತೆಯ ಸಮ್ಮಿಲನ:

‘ಕೊಲ್ಯಾಟರಲ್ ಸೋಲ್ಸ್: ಬ್ರೋಕನ್ ಸೈಲೆನ್ಸ್’ ಕೇವಲ ಮತ್ತೊಂದು ಕ್ರೈಮ್ ಸರಣಿಯಲ್ಲ. ಇದು ಸಮಾಜದಲ್ಲಿ ನಡೆದುಹೋದ, ಯಾರಿಗೂ ತಿಳಿಯದ ಕರಾಳ ಸತ್ಯಗಳು ಮತ್ತು ನೈಜ ಕ್ರೈಮ್ ಪ್ರಕರಣಗಳ ಆಳವಾದ ಸಂಶೋಧನೆಯ ಮೇಲೆ ಆಧಾರಿತವಾಗಿದೆ. ಸಾಂಪ್ರದಾಯಿಕ ಚಿತ್ರೀಕರಣ ಶೈಲಿಯನ್ನು ಬದಿಗಿಟ್ಟು, ಅತ್ಯಾಧುನಿಕ ಎಐ (AI-Generated) ತಂತ್ರಜ್ಞಾನದ ಮೂಲಕ ಪಾತ್ರಗಳು, ಪರಿಸರ ಮತ್ತು ಹಿನ್ನೆಲೆಯನ್ನು ಮರುಸೃಷ್ಟಿಸಲಾಗುತ್ತಿದೆ, ವೀಕ್ಷಕರಿಗೆ ಹಿಂದೆಂದೂ ಕಾಣದ ದೃಶ್ಯ ವೈಭವ ಹಾಗೂ ಅತ್ಯಂತ ರೋಮಾಂಚಕ ಅನುಭವವನ್ನು ನೀಡಲಿದೆ. ಈ ಮಹತ್ವಾಕಾಂಕ್ಷಿ ತಂಡದಲ್ಲಿ ಉದ್ಯಮದ ಅತ್ಯಂತ ನುರಿತ ಮತ್ತು ಪ್ರತಿಭಾವಂತ ತಂತ್ರಜ್ಞರು ಕೈಜೋಡಿಸಿದ್ದು, ಮಂಜೇಶ್ (Manjesh) – ಕ್ರಿಯೇಟಿವ್ ಡೈರೆಕ್ಟರ್ (Creative Director), ದಿಲೀಪ್ (Dileep)– ಎಐ ಎಕ್ಸ್‌ಪರ್ಟ್ (AI Expert), ಕಾಳೀಶ್ವರನ್ (Kaleeshwaran) – ವಿಡಿಯೋ ಎಡಿಟರ್ (Video Editor) ಆಗಿ ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ.

6 ಪ್ರಮುಖ ಭಾಷೆಗಳಲ್ಲಿ ಪ್ಯಾನ್-ಇಂಡಿಯಾ ಟ್ರೇಲರ್:

ದೇಶಾದ್ಯಂತ ಇರುವ cinema ಹಾಗೂ ಒಟಿಟಿ ಪ್ರಿಯರನ್ನು ತಲುಪುವ ಬೃಹತ್ ಉದ್ದೇಶದಿಂದ ‘ಕೊಲ್ಯಾಟರಲ್ ಸೋಲ್ಸ್: ಬ್ರೋಕನ್ ಸೈಲೆನ್ಸ್’ ಸರಣಿಯ ಟ್ರೇಲರ್ ಅನ್ನು ಒಟ್ಟು ಆರು ಪ್ರಮುಖ ಭಾಷೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು, ಮಲಯಾಳಂ ಮತ್ತು, ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ಅನಾವರಣಗೊಂಡಿರುವ ಈ ಟ್ರೇಲರ್, ಸರಣಿಯ ತಾಂತ್ರಿಕ ಶ್ರೀಮಂತಿಕೆ ಮತ್ತು ರೋಮಾಂಚಕ ಸಾಕ್ಷಿಯಾಗಿದೆ. ಪ್ರತಿಯೊಂದು ಭಾಷೆಯಲ್ಲೂ ಸ್ಥಳೀಯ ವೀಕ್ಷಕರಿಗೆ ಕನೆಕ್ಟ್ ಆಗುವಂತೆ ಅತ್ಯಂತ ಪ್ರಭಾವಶಾಲಿಯಾಗಿ ಟ್ರೇಲರ್ ಮೂಡಿಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೆಂಡ್ ಸೃಷ್ಟಿಸುತ್ತಿದೆ.

ವೂಫ್ ಫಿಲ್ಮ್ಸ್ ಹೆಸರಿನ ಹಿಂದಿದೆ ಒಂದು ಭಾವನಾತ್ಮಕ ಕಥೆ!

ಈ ಅದ್ಭುತ ಪ್ರೊಡಕ್ಷನ್ ಹೌಸ್‌ನ ‘ವೂಫ್ ಫಿಲ್ಮ್ಸ್’ ಎಂಬ ವಿಶಿಷ್ಟ ಹೆಸರಿನ ಹಿಂದೆ ಒಂದು ಸುಂದರವಾದ ಹಾಗೂ ಭಾವನಾತ್ಮಕವಾದ ಕಥೆಯಿದೆ. ನಿರ್ದೇಶಕ ತ್ಯಾಗರಾಜ್ ರವಿಚಂದ್ರ ಅವರ ಜೀವನದ ಅವಿಭಾಜ್ಯ ಅಂಗವಾಗಿದ್ದ ‘ಎಫಿ’ (Effie) ಹೆಸರಿನ ಮುದ್ದಾದ ಲ್ಯಾಬ್ರಡಾರ್ (Labrador) ತಳಿಯ ಸಾಕು ನಾಯಿಯೇ ಈ ಹೆಸರಿಗೆ ಅಸಲಿ ಪ್ರೇರಣೆ. ತಮ್ಮ ಜೀವನದಲ್ಲಿ ಅಪಾರ ಪ್ರೀತಿ ಮತ್ತು ಸಕಾರಾತ್ಮಕತೆಯನ್ನು ತುಂಬಿದ್ದ ನೆಚ್ಚಿನ ಶ್ವಾನ ‘ಎಫಿ’ ಮೇಲಿನ ಗೌರವ ಹಾಗೂ ನೆನಪಿಗಾಗಿ ತ್ಯಾಗರಾಜ್ ಅವರು ತಮ್ಮ ಕನಸಿನ ಸಂಸ್ಥೆಗೆ ‘ವೂಫ್ ಫಿಲ್ಮ್ಸ್’ ಎಂದು ನಾಮಕರಣ ಮಾಡಿದ್ದಾರೆ. ಈ ಹೆಸರೇ ಸೂಚಿಸುವಂತೆ ಸಂಸ್ಥೆಯು ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ಅತ್ಯುತ್ತಮ ಕಂಟೆಂಟ್ ನೀಡಲು ಸದಾ ಬದ್ಧವಾಗಿದೆ.

ಡಿಜಿಟಲ್ ಲೋಕದಲ್ಲಿ ಕುತೂಹಲ ಮೂಡಿಸಿರುವ ಸರಣಿ:

ಕೃತಕ ಬುದ್ಧಿಮತ್ತೆಯು ಸಿನಿಮಾ ರಂಗವನ್ನು ಹೇಗೆ ಬದಲಾಯಿಸಬಲ್ಲದು ಎಂಬುದಕ್ಕೆ ಭಾರತದ ಈ ಮೊದಲ ಪ್ರಯತ್ನ ಅತ್ಯುತ್ತಮ ಉದಾಹರಣೆಯಾಗಲಿದೆ. ಅಪರಾಧ ಜಗತ್ತಿನ ಕರಾಳ ಮುಖಗಳನ್ನು ಅನಾವರಣಗೊಳಿಸುವ ಕಥಾಹಂದರ ಹೊಂದಿರುವ ಈ ಪ್ಯಾನ್-ಇಂಡಿಯಾ ಸರಣಿಯು ಸದ್ಯದಲ್ಲೇ ಪ್ರಮುಖ ಡಿಜಿಟಲ್ ವೇದಿಕೆಗಳಲ್ಲಿ ಬಿಡುಗಡೆಯಾಗಲಿದ್ದು, ಕ್ರೈಮ್ ಥ್ರಿಲ್ಲರ್ ಹಾಗೂ ಡಾಕ್ಯುಮೆಂಟರಿ ಪ್ರಿಯರಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ.

ಈಕ್ಷಣ Logo

ಕರ್ನಾಟಕ ಮತ್ತು ನಮ್ಮ ಬೆಂಗಳೂರಿನ ತಾಜಾ ಸುದ್ದಿಗಳು, ತಂತ್ರಜ್ಞಾನ ಮತ್ತು ಜೀವನಶೈಲಿಯ ಅಪ್‌ಡೇಟ್‌ಗಳಿಗಾಗಿ ನಿಮ್ಮ ನಂಬಿಕಸ್ತ ತಾಣ. ಜಾಣ್ಮೆಯಿಂದ ಓದಿ.

ನಮ್ಮನ್ನು ಅನುಸರಿಸಿ